ನಮ್ಮ ಕನ್ನಡಪ್ರಭದ ಪತ್ರಿಕೆಯಲ್ಲಿ ಶ್ರೀ ಶ್ರೀ ಶಂಕರ
ಭಗವದ್ಪಾದರ ಬಗ್ಗೆ ಬಹಳಷ್ಟು ದಿನಗಳಿಂದ ಚರ್ಚೆ ನಡೆಯುತ್ತಲೇ ಇದೆ. ಕೆಲವರು ಅಪಕ್ವ ಮನಸ್ಕರು ಬರೀ
ಟೀಕಿಸಿದ್ದಾರೆ. ಮೊದಲು ಅರ್ಥ ಮಾಡಿಕೊಳ್ಳಬೇಕಾದದ್ದು ಭಗವದ್ಪಾದರು, ರಾಮಾನುಜರು ಹಾಗು ಮಧ್ವರು
ದೊಡ್ಡವರು ಹಾಗು ದೈವಾಂಶ ಹೊಂದಿರುವಂತ ಮಹಾ ಜ್ಞಾನಿಗಳು. ಇವರುಗಳನ್ನ ಕಿಂಚಿತ್ ಓದಿರುವಂಥ
ನಾವುಗಳು ಹಾಗು ಏನು ಓದಿರುತ್ತೀವೋ ಅದನ್ನು ಅರ್ಥ ಸರಿಯಾಗಿ ಮಾಡಿಕೊಳ್ಳದೇ ವಿನಾಕಾರಣ ಟೀಕಿಸುವಂಥ
ಪಾಮರರು ಆದ ನಾವಗಳು, ಮೊದಲು ಅಧ್ಯಯನವನ್ನು ಮಾಡೋಣ, ಅರ್ಥವಾಗದ್ದನ್ನು ನಾವು ವಿದ್ವಾಂಸರ ಬಳಿ
ಕೇಳೋಣ, ಕೇಳಿದ ಮೇಲೆ ಅರ್ಥ ಮಾಡಿಕೊಳ್ಳೋಣ. ಅರ್ಥ ಮಾಡಿಕೊಂಡ ಮೇಲೆ ಅದನ್ನು ಸಾಧ್ಯವಾದರೆ
ಅನುಸರಿಸೋಣ ಹಾಗು ಆಸಕ್ತಿ ಇರುವವರಿಗೆ, ಸುಮನಸ್ಕರಿಗೆ, ನಮ್ಮ ಮಕ್ಕಳಿಗೆ, ಈ ಶ್ರೇಷ್ಠ
ವ್ಯಕ್ತಿಗಳು ಹಾಗು ಅವರ ಕೃತಿಗಳ ಬಗ್ಗೆ ತಿಳಿಸೋಣ. ನಮ್ಮ ವಿನಯತೆ, ಘನತೆ, ಸಾಹಿತ್ಯ ಬಗೆಗಿನ
ಒಲವು, ಧರ್ಮ ಗ್ರಂಥಗಳ ಬಗ್ಗೆ ಇರುವ ನಂಬಿಕೆ ಹಾಗು ಶ್ರದ್ಧೆಗಳನ್ನು ಎತ್ತಿ ಹಿಡಿದು ನಮ್ಮ
ಭಕ್ತಿಯನ್ನು ಪ್ರದರ್ಶಿಸೋಣ.
ಭಗವದ್ಪಾದರ ಕೊಡುಗೆಯ ಬಗ್ಗೆ ಮಾತಾದಬೇಕಾದರೆ ಅವರ
ಶ್ರೇಷ್ಠ ಕೃತಿಗಳನ್ನು ಅಧ್ಯಯನ ಮಾಡಬೇಕು. ಭಗವದ್ಪಾದರು ನಾನೇ ಅದ್ವೈತ ಕಂಡು ಹಿಡಿದೆ ಎಂದು
ಎಲ್ಲಾದರು ನಿರೂಪಿಸಿದ್ದಾರಾ? ಅವರು ಶ್ರುತಿ ಸ್ಮೃತಿ ಸಹಾಯದಿಂದ ತಮ್ಮ ತತ್ವವನ್ನು
ಮಂಡಿಸುತ್ತಾರೆ. ಇದು ನಮಗೆ ಪ್ರಾಥಮಿಕ ಶಾಲೆಗಳಲ್ಲಿಯೇ ಪ್ರಾಧ್ಯಾಪಕರು ತಿಳಿಸಿಕೊಡುತ್ತಾರೆ. ಭಗವದ್ಪಾದರನ್ನು
ಟೀಕಿಸುವ ನೀವು ಇದನ್ನು ಕಲಿತಿಲ್ಲವೇ? ಶ್ರೀ
ರಾಮಾನುಜಾಚಾರ್ಯರು ಭಗವದ್ಪಾದರ ಕೃತಿಗಳನ್ನು ಅಧ್ಯಯನ ಮಾಡಿದರು. ಇವರು ಮಹಾತ್ಮರು. ಎಲ್ಲಿ,
ಅವರೇನಾದರೂ ಶ್ರೀ ಶ್ರೀ ಶಂಕರರ ಬಗ್ಗೆ ಟೀಕಿಸಿದ್ದಾರಾ? ಮಧ್ವರು ಇವರಿಬ್ಬರಾದಮೇಲೆ ಬಂದವರು,
ಅವರು ಇವರೀರ್ವರ ಗ್ರಂಥಗಳನ್ನು ಅಧ್ಯಯನ ಮಾಡಿ ಅವರ ಮಂಡನೆಯನ್ನು ಪ್ರತಿಪಾದಿಸಿದವರು. ಇವರು
ಮಹಾನ್ ಸಂತಶಿರೋಮಣಿಗಳು. ಎಲ್ಲಿ ಶ್ರೀಮನ್ ಮಧ್ವಾಚಾರ್ಯರು ಶ್ರೀ ಶ್ರೀ ಭಗವದ್ಪಾದರನ್ನು
ಎಲ್ಲಾದರೂ ನೀವು ಬರುಯುವ ಹಾಗೆ ಕೆಳ ಮಟ್ಟಕ್ಕೆ
ತಂದು ಟೀಕಿಸಿರುವುದು ತೋರಿಸಿ ನೋಡೋಣ?
ಈ ಮೂವರೂ ಮಹಾ ವ್ಯಕ್ತಿಗಳು ಅವರವರ ಶಾಖೆಗಳಲ್ಲಿ
ಅತೀಂದ್ರಿಯತ್ವವನ್ನು ಸಾಧಿಸಿ ಪರಮಾತ್ಮವನ್ನು ದರ್ಶನ ಮಾಡಿದಂತಹ ಮಹಾನ್ ಶಕ್ತರು. ಭಕ್ತರು,
ಮಹಾತ್ಮರು ಹಾಗು ಭಗವಂತನಲ್ಲಿ ಲೀನರಾಗಿ ಭಗವಂತರೇ ಆದವರು. ಭಗವದ್ಪಾದರನ್ನು ಟೀಕಿಸುವ ನೀವು
ಭಗವಂತನನ್ನು ನೋಡಿದ್ದೀರಾ?
ಶ್ರೀ ಶ್ರೀಗಳು ಭಗವದ್ಗೀತಾಭಾಷ್ಯ ಬರೆಯದೇ ಇದ್ದಿದ್ದರೆ
ನಮಗೆ ವ್ಯಾಸ ಮಹರ್ಷಿಗಳ ಈ ಅದ್ಭುತ ಕೃತಿಯ, ಈಗ್ಗೆ ಕಾಣಸಿಗುವ ಭಾಷ್ಯವೆನಿಸಿಕೊಳ್ಳುವ ಅನುವಾದಗಳು ಎಲ್ಲಿ
ಸಿಗುತ್ತಿತ್ತು? ಭಗವದ್ಪಾದರನ್ನು ಟೀಕಿಸುವ ನೀವು ಬರೆಯುತ್ತಿದ್ದಿರಾ? ಅಥವಾ ಅವರೇನು ಬರೆದರು,
ಅದರಿಂದ ಮಾನವ ಕುಲಕ್ಕೆ ಏನು ಒಳಿತಾಯ್ತು, ಆಗಿದೆ ಹಾಗು ಆಗುತ್ತಲೇ ಇರುತ್ತದೆ ಎಂದು
ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತೀರಾ?
ಮೊನ್ನೆ ಒಂದು ಲೇಖನದಲ್ಲಿ ಕುವೆಂಪುರವರು ಬರೆದಿರುವ
“ಪೂರ್ಣಮದು ಪೂರ್ಣಮಿದು....” ವಾಕ್ಯವನ್ನು ತಂದಿದ್ದರು. ಅದರ ಮೂಲ ಯಾವುದು ಗೊತ್ತೇ?
ಈಶಾವಾಸ್ಯೋಪನಿಷತ್ತಿನ ಮೊದಲನೇ ಮಂತ್ರ “ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್
ಪೂರ್ನಮುದಚ್ಯತೆ, ಪೂರ್ಣಸ್ಯ ಪೂರ್ಣಮಾದಾಯ ಪೂರ್ನಮೆವಾವಶಿಷ್ಯತೆ”. ಕುವೆಂಪುರವರೇ ಹೇಳುವ ಹಾಗೆ
ಇದರಲ್ಲಿ ಅದ್ವೈತ ಸಿದ್ಧಾಂತವನ್ನು ನಾವು ಕಾಣಬಹುದು. ಕುವೆಂಪುರವರು ಉಪನಿಷತ್ತಿನ ವಾಕ್ಯವನ್ನು
ಪುನರುಚ್ಚರಿಸಿದ್ದಾರೆ. ಉಪನಿಶತ್ತನ್ನು ಒದಲಿಕ್ಕಾಗದವರಿಗೆ ಕಣ್ತೆರೆದಿದ್ದಾರೆ.
ಹಾಗೆಯೇ ನಾವು ಶ್ರೀ ಶ್ರೀ ಶಂಕರ ಭಗವದ್ಪಾದರ ಕೃತಿಗಳನ್ನ
ಅರ್ಥೈಸಿಕೊಳ್ಳಬೇಕಾದರೆ ಅದರ ಮೂಲ ವೇದಾಂತವಾದ
ಉಪನಿಷತ್ತುಗಳು. ಹಾಗೆಯೇ ನೀವು ರಾಮಾಯಣ ಹಾಗು ಮಹಾಭಾರತಗಳನ್ನು ಅಧ್ಯಯನ ಮಾಡುವಾಗ
ಉಪನಿಶಾತ್ತುಗಳ ಅಂಶಗಳು ಎದ್ದು ಕಾಣುತ್ತದೆ. ರಾಮಾಯಣ ಹಾಗು ಮಹಾಭಾರತಗಳು ಬರೀ ಶ್ರೇಷ್ಠ
ಕಾವ್ಯವೆನಿಸಿಕೊಳ್ಳದೆ ನಮ್ಮ ಧರ್ಮಗ್ರಂಥಗಳು ಎಂದನಿಸಿಕೊಂಡವು. ನಾವು ಇಲ್ಲಿ ಅರ್ಥ
ಮಾಡಿಕೊಳ್ಳಬೇಕಾದುದೇನೆಂದರೆ ಈ ಕಾವ್ಯಗಳು ನಮಗೆ ಉಪನಿಶಾತ್ತುಗಳ ಸಾರವನ್ನು ತಿಳಿಸುತ್ತವೆ.
ಎಲ್ಲರೂ ಉಪನಿಶತ್ತುಗಳನ್ನು ಒದದಿರುವುದರಿಂದ ಈ ಗ್ರಂಥಗಳು ಸಾಮಾನ್ಯ ಜನರಿಗೆ ಧರ್ಮಪಾಠವಾಗಲೆಂದು
ಮಹರ್ಷಿಗಳಾದ ಪ್ರಾಚೇತಸ ಹಾಗು ಕೃಷ್ಣದ್ವೈಪಾಯನರು ನಮಗೆ ಈ ಎರಡು ಮಹಾಕಾವ್ಯಗಳನ್ನು ಕೊಡುಗೆಯಾಗಿ
ಕೊಟ್ಟಿದ್ದಾರೆ. ಇವರೆಡು ಬಂದಮೇಲೆ ಉಪನಿಷತ್ತುಗಳ ಮೌಲ್ಯ ಕಮ್ಮಿ ಆಯಿತೆನು?
ಉಪನಿಶತ್ತುಗಳನ್ನು ಆಧಾರವಾಗಿರಿಸಿಕೊಂಡು ಹಲವಾರು
ಬುದ್ಧಿಜೀವಿಗಳು, ಸಂತರು, ಧರ್ಮಸರ್ವಶ್ರೇಷ್ಠರು ತಮ್ಮ ತಮ್ಮ ನಿಲುವುಗಳನ್ನು ಮಂಡಿಸಿದ್ದಾರೆ. ಬುದ್ಧನಾಗಲೀ,
ತ್ರೈಯಾಚಾರ್ಯರಾಗಲಿ ಇದಕ್ಕೆ ಹೊರತಲ್ಲ. ಹಾಗಿದ್ದಮೇಲೆ ಯಾರು ಯಾರ ಹೇಳಿಕೆಗಳನ್ನು ಪ್ರಮೇಯಿಸಲು
ಸಾಧ್ಯ? ನಾವು ಯಾರನ್ನೂ ಯಾರಿಗೋ ಹೋಲಿಸುವಾಗ ಬಹು ಎಚ್ಚರದಿಂದ ಅವರವರ ಕೊಡುಗೆಗಳನ್ನ ಬಹು ದೀರ್ಘ
ಅಧ್ಯಯನದ ನಂತರ ಅವರವರ ಕೊಡುಗೆಗಳನ್ನ ಸಮಾಜಕ್ಕೆ ನೆನಪಿಸಿದರೆ ಒಳಿತಾಗುತ್ತದೆ. ಈ ಹಿಂದೆ ಮಹಾನ್
ವ್ಯಕ್ತಿಗಳು ಮಾಡಿದ್ದು ಅದೇ. ಉಪನಿಷತ್ತುಗಳನ್ನು ತಮ್ಮದೇ ಆದ ಕಥೆಗಳಲ್ಲಿ ರೂಪಿಸಿ
ಅದನ್ನನುಸರಿಸುವುದೇ ಜೀವನದ ಗುರಿ, ಹೆಗ್ಗಳಿಕೆ ಹಾಗು ಉತ್ತಮಜನಸಾಮ್ರಾಜ್ಯಸೃಷ್ಟಿ ಎಂದು
ಪ್ರಜ್ಞಾವಂತರೆಲ್ಲರೂ ನಂಬಿರುವಂತಹ ದೈವಪ್ರಸಾದವಾಗಿದೆ.
ಶ್ರೀ
ಶ್ರೀಗಳ ಕೃತಿಗಳಲ್ಲಿ ಹಾಗು ಮತ್ತೆ ಆಚಾರ್ಯರ ಕೃತಿಗಳಲ್ಲಿ ನಾವು ಇದನ್ನೇ ಕಾಣಬಹುದು. ಅವರ್ಯಾರೂ
ಒಬ್ಬರನ್ನೊಬ್ಬರು ಟೀಕೆ ಮಾಡದಿರುವಾಗ? ಅವರ್ಯಾರೂ ಕಾಲ ಹರಣ ಮಾಡದೆ ಉತ್ತಮ ಸಮಾಜ ಸೃಷ್ಟಿಸಲು
ತಮ್ಮ ಗ್ರಂಥಗಳನ್ನು ಕೊಡುಗೆಯಾಗಿ ಕೊಟ್ಟಿರುವಾಗ ಅವಗಳನ್ನ ಅಧ್ಯಯನ ಮಾಡುತ್ತೀರಾ ಅಥವಾ ಸುಮ್ಮನೆ ಒದಲಿಕ್ಕಾಗದ್ದರಿಂದ
ಅಥವಾ ಅರ್ಥಮಾಡಿಕೊಳ್ಳಲಾಗದ್ದರಿಂದ ಅಥವಾ ನೀವು ಒಳ್ಳೆಯ ಗುರುವನ್ನು ಆರಿಸಿಕೊಳ್ಳದೆ ಅರಿವಿನೆಡೆಗೆ
ಹೋಗದ್ದರಿಂದ ವೃಥಾ ಕಾಲಹರಣಮಾಡಿ ನಿಮ್ಮನ್ನು ನೀವು ಪ್ರಭಾವಿತಗೊಳಿಸಿಕೊಳ್ಳಲು ಬೇರೆಯವರದ್ದನ್ನು
ತೆಗಳಿ ಮೇಲೆ ಬರಲು ಪ್ರಯತ್ನಪಡುತ್ತಿದ್ದೀರ. ಜನರಿಗೆ ಒಳ್ಳೆಯ ಮಾರ್ಗವನ್ನು ತಿಳಿಸಿಕೊಡಿ (ತ್ರೈಯಾಚಾರ್ಯರು
ತಿಳಿಸಿಕೊಟ್ಟಿದ್ದು ಅದನ್ನೇ) ಅಪಮಾರ್ಗವನ್ನಲ್ಲ (ಈಗ ನೀವು ಮಾಡುತ್ತಿರುವುದು ಅದನ್ನ).
ಎಚ್ಚೆತ್ತುಕೊಂಡು ಮಾನವ ಧರ್ಮಕ್ಕೆ ಒಳಿತು ಮಾಡುವ ಕಾರ್ಯವನ್ನು ಮಾಡಿ. ಇದನ್ನು ಮಾಡಲು ಮೊದಲು
ಅಧ್ಯಯನ ಮಾಡಿ, ಮುತ್ಸದ್ದಿಯಾಗಿ, ಮೂರ್ಖರಾಗಬೀಡಿ.
ಅಧ್ಯಯನ ಬಿಟ್ಟರೆ ಬೇರೇನೂ ನಮಗೆ ವರವಾಗಲಾರದು.
ಬೇರೆಲ್ಲವೂ ಬರುವುದು ಹೋಗುವುದು. ಅಧ್ಯಯನದಿಂದ ಶ್ರೇಷ್ಠ ಮಟ್ಟದ ಜ್ಞಾನವನ್ನು ಸಂಪಾದಿಸಬಹುದು.
ನಮ್ಮನ್ನು ಅದರಲ್ಲಿ ತೊಡಗಿಸಿಕೊಳ್ಳೋಣ. ಮೊದಲು ಮಗುವಂತೆ ನಮ್ಮ ಮನಸ್ಸನ್ನು ತೆರೆದು ವಿದ್ವಾಂಸರ,
ಜ್ಞಾನಿಗಳ ಮಾತುಗಳನ್ನೂ ಆಲಿಸೋಣ. ಎಲ್ಲಾದರೂ ಯಾವುದಾದರ ಬಗ್ಗೆ ನಮಗೆ ಆಸಕ್ತಿ ಹೆಚ್ಚಾದಲ್ಲಿ
ಅದನ್ನು ಅಧ್ಯಯನ ಮಾಡೋಣ, ಅರ್ಥ ಮಾಡಿಕೊಂಡಾದಮೇಲೆ ತಿಳಿದವರ ಜೊತೆ ಮಾತಾಡಿ, ಅವರ ಅಧ್ಯಯನದ
ಪ್ರಭಾವದಿಂದ ನಮ್ಮ ಧರ್ಮಾಸಕ್ತಿಯನ್ನು ವ್ರುದ್ಧಿಸಿಕೊಳ್ಳೋಣ.